ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತ ದೇಶದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿಯೊಂದು ರಾಜ್ಯವು ತನ್ನದೇ ಸರ್ಕಾರ ಹೊಂದಿರುತ್ತದೆ ಮತ್ತು ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ಆಡಳಿತ ಹೊಂದಿದೆ. ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಈ ದೇಶದ ರಾಷ್ಟ್ರ ಪಕ್ಷಿಯು ನವಿಲು ಮತ್ತು ರಾಷ್ಟ್ರ ಪ್ರಾಣಿಯು ಹುಲಿಯು ಆಗಿದೆ. ಈ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಭಾರತದ ರಾಜ್ಯ ಪಕ್ಷಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. == ರಾಜ್ಯಗಳು ==